ಅಶ್ವಿನಿ ಪುನೀತ್ ರಾಜ್ಕುಮಾರ್ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ. ಯೆಸ್.. ಜೂನಿಯರ್ ಟೋಸ್ ಇಂಟರ್ ನ್ಯಾಷನಲ್ ಪ್ರಿ- ಸ್ಕೂಲ್ ಅನ್ನು ಪ್ರಾರಂಭಿಸಲು ಅವರು ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಶ್ರುತಿ ಕಿರಣ್ ಮತ್ತು ಡಾ. ಬಿಂದು ರಾಣಾ ಜೊತೆ ಕೈಜೋಡಿಸಿದ್ದಾರೆ. ಜೂನಿಯರ್ ಟೋಸ್ ಇಂಟರ್ ನ್ಯಾಷನಲ್ ಪ್ರಿ ಸ್ಕೂಲ್, ಕ್ರಾಂತಿಕಾರಿ, ಪ್ರಾಥಮಿಕ ಶಿಕ್ಷಣ ಯೋಜನೆ, ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಹೊಸ ದಾರಿ ನಿರ್ಮಿಸಲು ಸಜ್ಜಾಗಿದೆ. ಖ್ಯಾತ ಶಿಕ್ಷಣತಜ್ಞೆ ಸುನೀತಾ ಗೌಡ ನೇತೃತ್ವದಲ್ಲಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ದೂರದೃಷ್ಟಿಯ ಪ್ರೋತ್ಸಾಹ ಮತ್ತು ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ, ಜೂನಿಯರ್ ಟೋಸ್ ಶಾಲೆ ಮಕ್ಕಳಲ್ಲಿ ಅವ್ರ ಆರಂಭಿಕ ವರ್ಷಗಳಲ್ಲಿ ನಾಯಕತ್ವ, ಸೃಜನಶೀಲತೆ & ಉದ್ಯಮಶೀಲತೆಯ ಚಿಂತನೆಗಳನ್ನು ಪೋಷಿಸುವ ಉದ್ದೇಶವನ್ನು ಹೊಂದಿದೆ.
ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ, ಸ್ಪೂರ್ತಿ ವಿಶ್ವಾಸ್ ಅವರು ತಮ್ಮ ಅನುಭವವನ್ನು ತಂದೊಡ್ಡಿ, ತಲೆಮಾರಿನ ಆತ್ಮವಿಶ್ವಾಸಿ ಯುವ ನಾಯಕರಿಗೆ ಸ್ಪೂರ್ತಿ ನೀಡಲು ಕೈಜೋಡಿಸಿದ್ದಾರೆ. ಈ ಯೋಜನೆ ಇಂಡಿಯನ್ ವುಮನ್ ಅಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಶಿಕ್ಷಣತಜ್ಞೆ ಐಶ್ವರ್ಯ DKS ಹೆಗ್ಡೆ ಅವರ ಸಾನ್ನಿಧ್ಯದಲ್ಲಿ ಉದ್ಘಾಟನೆಯಾಯಿತು.
ಉದ್ಘಾಟನಾ ಸಮಾರಂಭದಲ್ಲಿ, ಸ್ವತಃ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡುತ್ತಾ, ‘ನಾನು ಮತ್ತು ಪುನೀತ್ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸೋ ಕನಸನ್ನು ಹೊಂದಿದ್ದೆವು. ಈ ಯೋಜನೆ ನಮ್ಮ ಕನಸನ್ನು ಈಡೇರಿಸುತ್ತಿದೆ. ಪ್ರತಿ ಮಗುವಿನ ಸಾಮರ್ಥ್ಯವನ್ನು ಪೋಷಿಸುವ ಶಾಲೆಗಳನ್ನು ರಚಿಸುವುದು, ಶೈಕ್ಷಣಿಕ ಉತ್ಕೃಷ್ಟತೆಯನ್ನು ಮಾತ್ರವಷ್ಟೇ ಅಲ್ಲದೆ, ಪಾತ್ರ ಮತ್ತು ನಾಯಕತ್ವವನ್ನೂ ನಿರ್ಮಿಸುವುದರಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುತ್ತದೆ’ ಎಂದಿದ್ದಾರೆ.
#aswinipuneethrajkumar #juniortoes #preschool #puneethrajkumar #appufans #sandalwood #kannadanews #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- [ Ссылка ]
.
ಫೇಸ್ಬುಕ್- [ Ссылка ]
.
ಯೂಟ್ಯೂಬ್- [ Ссылка ]
.
ಇನ್ಸ್ಟಾಗ್ರಾಂ- [ Ссылка ]
.
ವೆಬ್ ಸೈಟ್- [ Ссылка ]
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
@guaranteenews
Ещё видео!