Nagarahavu Old Kannada Movie Song: Kathe Heluve Nanna Kathe Heluve - HD Video
Actor: Vishnuvardhan, Aarathi, Shubha
Music: Vijaya Bhaskar
Singer: P Susheela
Lyrics: Chi Udayashankar
Director: Puttanna Kanagal
Year :1972
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Nagarahavu – ನಾಗರಹಾವು1972*SGV
Kathe Heluve Song Lyrics In Kannada
ಕತೆ ಹೇಳುವೆ ನನ್ನ ಕತೆ ಹೇಳುವೆ
ಬಾಳಿನ ಪುಟಗಳಲ್ಲಿ ಕಣ್ಣೀರ ಹನಿಗಳಲಿ
ಬರೆದಿರುವ ಹೆಣ್ಣಿನಾ ಕತೆ ಹೇಳುವೆ
ಕತೆ ಹೇಳುವೆ ನನ್ನ ಕತೆ ಹೇಳುವೆ
ನೀ ತಂದ ಅರಿಸಿಣ ಕುಂಕುಮದ ಕಾಣಿಕೆ
ನೀ ತಂದ ಅರಿಸಿಣ ಕುಂಕುಮದ ಕಾಣಿಕೆ
ಸ್ವೀಕರಿಸಿ ನೀನಂದು ನುಡಿದಂತೆ ನೆಡೆದೆ
ಹಿರಿಯರಾಣತಿಯಂತೆ ಹಸೆಮಣೆಯ ಏರಿದೆ
ನನ್ನಾಸೆಯೆಲ್ಲವನು ನಾನೆ ಕೊಂದೆ
ಕತೆ ಹೇಳುವೆ ನನ್ನ ಕತೆ ಹೇಳುವೆ
ಮನ ನಿನ್ನ ವರಿಸಿತ್ತು ವಿಧಿಯನಗೇ ಬೇರಿತ್ತೂ
ಮನ ನಿನ್ನ ವರಿಸಿತ್ತು ವಿಧಿಯನಗೇ ಬೇರಿತ್ತೂ
ಬೇರೊಂದು ಮನೆಯಲ್ಲಿ ಬದುಕು ಕಾದಿತ್ತು
ಹೃದಯ ಬರಿದಾಗಿತ್ತು ಮೌನದಲಿ ಭಯವಿತ್ತು
ಕಲಿತಿಮ ಪಡೆ ನನ್ನ ಪಯಣ ಸಾಗಿತ್ತೂ
ಕತೆ ಹೇಳುವೆ ನನ್ನ ಕತೆ ಹೇಳುವೆ
ಮೊದಲದಿನ ರಾತ್ರಿಯಲಿ ಮುಗುಳುನಗೆ ಮೋಡಿಯಲಿ
ಮೊದಲದಿನ ರಾತ್ರಿಯಲಿ ಮುಗುಳುನಗೆ ಮೋಡಿಯಲಿ
ಮೈಮರೆಸಿ ಮುಳ್ಳಿನ ತೆರೆಯ ಹಾಕಿದರು
ಮುದ್ದಿಸುವ ತುಟಿಗಳಿಗೆ ಮತ್ತೆಂದು ಹೇಳುತಲಿ
ಮದುಪಾನದಾಹುತಿಗೆ ನನ್ನ ನೂಕಿದರು
ಮದುಪಾನದಾಹುತಿಗೆ ನನ್ನ ನೂಕಿದರು
ಕತೆ ಹೇಳುವೆ ನನ್ನ ಕತೆ ಹೇಳುವೆ
ಅವರ ಆಸೆ ಮುಗಿದಿರಲು ಹಣದ ಆಸೆ ಏರಿರಲು
ಅವರ ಆಸೆ ಮುಗಿದಿರಲು ಹಣದ ಆಸೆ ಏರಿರಲು
ಕಾಮುಕರ ಕೂಪದಲಿ ನನ್ನ ತಳ್ಳಿದರು
ಬೇಡಿಕೆಗೆ ಬೆಲೆಯಿಲ್ಲ ಕಂಬನಿಗೆ ಕೊನೆಯಿಲ್ಲ
ಪಶುವಂತೆ ನನ್ನ ಮಾರಾಟ ಮಾಡಿದರು
ಪಶುವಂತೆ ನನ್ನ ಮಾರಾಟ ಮಾಡಿದರು
ಕತೆ.. (ಸಾಕೂ ಆಲಮೇಲ)
Ещё видео!