[ Ссылка ]
[ Ссылка ]
Playlist of Rama kritis
ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ || ಪ ||
ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ || ಅ.ಪ ||
ಶಿವನು ಧನ್ಯನಾದ ಮೌನಿ ಯುವತಿ ಪಾವನೆಯಾದಳು
ರವಿಯ ಸುತನು ಪದವಿ ಪಡೆದ, ಧ್ರುವನು ದಿವಿಜನೆನಿಸಿದ || ೧ ||
ಕರಿವರ ಪ್ರಹ್ಲಾದ ದ್ರೌಪದಿ ವರ ವಿಭೀಷಣರೆಲ್ಲರೂ
ಹರಿಯ ಸ್ಮರಣೆ ಮಾಡಿ ಸೌಖ್ಯ ಭರಿತರಾಗಲಿಲ್ಲವೇ || ೨ ||
ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳು
ವರದ ಗೋಪಾಲ ವಿಠಲನ ನಾಮ ದುರಿತಕಾನನ ಪಾವಕ || ೩ ||
रामनाम भजिसिदवगे उंटे भवद बंधन ॥ प ॥
कामहरन सतियु सदा नॆमदिंद भजिसुव ॥ अ.प ॥
शिवनु धन्यनाद मौनि युवति पावनेयादळु
रविय सुतनु पदवि पडेद, ध्रुवनु दिविजनेनिसिद ॥ १ ॥
करिवर प्रह्लाद द्रौपदि वर विभीषणरेल्लरू
हरिय स्मरणे माडि सौख्य भरितरागलिल्लवॆ ॥ २ ॥
गिरिजे राम मंत्रदिंद परम मंगळेयादळु
वरद गॊपाल विठलन नाम दुरितकानन पावक ॥ ३ ॥
rAmanAma Bajisidavage uMTe Bavada baMdhana || pa ||
kAmaharana satiyu sadA nEmadiMda Bajisuva || a.pa ||
Sivanu dhanyanAda mauni yuvati pAvaneyAdaLu
raviya sutanu padavi paDeda, dhruvanu divijanenisida || 1 ||
karivara prahlAda draupadi vara viBIShaNarellarU
hariya smaraNe mADi sauKya BaritarAgalillavE || 2 ||
girije rAma maMtradiMda parama maMgaLeyAdaLu
varada gOpAla viThalana nAma duritakAnana pAvaka || 3 ||
Ещё видео!