sirsi Marikamba kona /ಸಿರ್ಸಿ ಮಾರಿ ಕೋಣ /ಸಿರ್ಸಿ ಮಾರಿಕಾಂಬಾ ದೇವಸ್ಥಾನದ ಕೋಣದ ಮೆರವಣಿಗೆ
ಮಾರಿಕಾಂಬಾ ಜಾತ್ರೆಯ ಪೂರ್ವದಲ್ಲಿ ಈ ಮೆರವಣಿಗೆ ಪ್ರಮುಖ ಘಟ್ಟ. ಬಾಬುದಾರರು, ಆಸಾದಿಗಳು ದೇವರಿಗೆ ಹಾಗೂ ಪಟ್ಟದ ಕೋಣಕ್ಕೆ ಕಂಕಣ ಕಟ್ಟುತ್ತಾರೆ. ನಂತರ ಮೈತ್ರಿ ಕುಟುಂಬದ ಜನ ಈ ಕೋಣವನ್ನು ಊರು ಸುತ್ತಿಸುತ್ತಾರೆ. ಈ ಕೋಣ ನಿಯಂತ್ರಿಸಲು 10 ಜನ ಬೇಕು.
ದಢೂತಿ ಶರೀರ, ನೆಲ ನಡುಗಿಸೋ ಗುಟುರು, ಮಾರುದ್ದದ ಕೋಡು, ಏಳೆಂಟು ಆಳುಗಳಿಗೂ ಬಾಗದ ಮಹಾಕಾಯ, ಏನಿದು ಅಂತೀರಾ? ಮಾರಿ ಕೋಣ. ಮಾರಿ ಕೋಣ ಈಗ ಎರಡು ವರ್ಷದ ನಂತರ ಉತ್ತರ ಕನ್ನಡದ (Uttara Kannada) ಶಿರಸಿ (Sirsi) ಪೇಟೆಯನ್ನೆಲ್ಲಾ ಗಾಂಭೀರ್ಯದಲ್ಲಿ ಸುತ್ತುತ್ತಿದೆ. ಆಸಾದಿಗಳು ಕಂಕಣ ಕಟ್ಟಿದ ನಂತರ ತಾಯಿಯ ಪಟ್ಟದ ಕೋಣವನ್ನು ಗಲ್ಲಿ ಗಲ್ಲಿಗಳಲ್ಲಿ ಮೆರವಣಿಗೆ ಮಾಡಲಾಗುತ್ತಿದೆ.
ಮಾರಿಕೋಣ ಮೆರವಣಿಗೆ
ಹೌದು, ಮಾರಿಕಾಂಬಾ ಜಾತ್ರೆಯ ಪೂರ್ವದಲ್ಲಿ ಈ ಮೆರವಣಿಗೆ ಪ್ರಮುಖ ಘಟ್ಟ. ಬಾಬುದಾರರು, ಆಸಾದಿಗಳು ದೇವರಿಗೆ ಹಾಗೂ ಪಟ್ಟದ ಕೋಣಕ್ಕೆ ಕಂಕಣ ಕಟ್ಟುತ್ತಾರೆ. ನಂತರ ಮೈತ್ರಿ ಕುಟುಂಬದ ಜನ ಈ ಕೋಣವನ್ನು ಊರು ಸುತ್ತಿಸುತ್ತಾರೆ. ಈ ಕೋಣ ನಿಯಂತ್ರಿಸಲು 10 ಜನ ಬೇಕು. ಊರೂರು ಸುತ್ತಿ ಬಾಳೆಹಣ್ಣು, ಅಕ್ಕಿ, ಎಣ್ಣೆ, ತರಕಾರಿಯನ್ನು ನೈವೇದ್ಯವಾಗಿ ಪಡೆಯುತ್ತದೆ ಈ ಕೋಣ. ನಂತರ ಜನರು ಮನೆಯ ಮುಂದೆ ಬಂದ ಕೋಣದ ಮೈಗೆ ಎಣ್ಣೆ ಹಾಗೂ ತಂಪು ನೀರನ್ನು ಸವರಿ ನೇವರಿಸುತ್ತಾರೆ. 5 ದಿನ ಕಾಲ ಮೆರಣವಿಗೆ ನಡೆಯಲಿದ್ದು, ಇಷ್ಟು ದಿನ ಗುಡಿಯಲ್ಲಿದ್ದ ಕೋಣ ಹೊರಗಡೆ ಬಂದಿದ್ದು ನೋಡುಗರಿಗೆ ಸಂಭ್ರಮದ ವಿಷಯವಾಗಿದೆ
[ Ссылка ]
Ещё видео!