#saalumaradathimmakka #lifestory
🌲🌴🌳🌳🌴🌲🌲🌳🌴🌴🌳🌲🌳🌴🌲🌲🌳🌴
ಪರಿಸರ ಎಂದ ತಕ್ಷಣ ನೆನಪಾಗುವ ಹೆಸರು ಸಾಲುಮರದ ತಿಮ್ಮಕ್ಕ.
ವೃಕ್ಷಮಾತೆ ಎಂದು ಸಹ ಇವರನ್ನು ಕರೆಯುತ್ತಾರೆ.
ವರ್ಷಗಳ ಹಿಂದೆ ನೂರಾರು ಸಸಿಗಳನ್ನು ನೆಟ್ಟು ಪರಿಸರಕ್ಕೆ ಕೊಡುಗೆ ನೀಡಿರುವ ತಿಮ್ಮಕ್ಕ, ತಾವು ನೆಟ್ಟ ಸಾಲು ಸಸಿಗಳಿಂದಲೇ ಸಾಲು ಮರದ ತಿಮ್ಮಕ್ಕ ಎಂಬ ಹೆಸರು ಪಡೆದುಕೊಂಡರು.
ಪರಿಸರಕ್ಕೆ ಸಾಲುಮರದ ತಿಮ್ಮಕ್ಕ ನೀಡಿರುವ ಕೊಡುಗೆ ತುಂಬಾ ಅಪಾರವಾಗಿದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಅವರನ್ನು ಗೌರವಿಸಿವೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ತಿಮ್ಮಕ್ಕ ಅವರು ಜನಿಸಿದರು.
ತಂದೆ ಚಿಕ್ಕರಂಗಯ್ಯ, ತಾಯಿ ವಿಜಯಮ್ಮ.
ಶಾಲೆಗೆ ಹೋಗೋದಕ್ಕೆ ಆಗದೆ, ತಿಮ್ಮಕ್ಕ ಮೊದಲು ದನಕರುಗಳನ್ನು ಮೇಯಿಸುತ್ತಿದ್ದರು.
ನಂತರ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು.
ಇವರು ಚಿಕ್ಕಯ್ಯ ಅನ್ನೋ 12, ವರ್ಷ ವಯಸ್ಸಿನ ಒಬ್ಬ ದನಕಾಯುವವರನ್ನು ಮಾಡುವೆ ಆಗ್ತಾರೆ.
ಚಿಕ್ಕಯ್ಯ ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರು.
ಮದುವೆಯಾಗಿ ಅದೆಷ್ಟೋ ವರ್ಷಗಳಾದರೂ ತಿಮ್ಮಕ್ಕ ಅವರಿಗೆ ಮಕ್ಕಳಾಗಿರಲ್ಲಿಲ್ಲ.
ಮಕ್ಕಳಿಲ್ಲದ ದುಃಖವನ್ನು ಮರೆಯಲು ರಸ್ತೆಯ ಬದಿಗಳಲ್ಲಿ ಆಲದ ಸಸಿಗಳನ್ನು ನೆಡಲು ಆರಂಭಿಸಿದರು.
ಕುದೂರಿನಿಂದ ಹುಲಿಕಲ್ ತನಕ ಇರುವ ರಾಜ್ಯ ಹೆದ್ದಾರಿ 94ರಲ್ಲಿ 4 ಕಿ.ಮೀ. ರಸ್ತೆ ಉದ್ದಕ್ಕೂ ಸಸಿಗಳನ್ನು ನೆಡ್ತಾರೆ ತಿಮ್ಮಕ್ಕರವರು ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು 2ನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಡ್ತಾರೆ ಆ ಸಸಿಗಳಲ್ಲಿ ಅವರ ಮಕ್ಕಳನ್ನ ಕಾಣ್ತಾರೆ
ತಿಮ್ಮಕ್ಕ ದಂಪತಿ ಈ ಸಸಿಗಳನ್ನು ನೆದೊಡಿಕ್ಕೆ ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು.
ಗಂಡ-ಹೆಂಡತಿ ಇಬ್ಬರೂ ನಾಲ್ಕು ಕಿಲೋಮೀಟರ್ ದೂರದಿಂದ ನೀರನ್ನ ತಗೊಂಡು ಹೋಗಿ ಸಸಿಗಳಿಗೆನಿರ್ಣಸುತ್ತಾರೆ,
ಸಸಿಗಳನ್ನು ಜಾನುವಾರುಗಳ ಕಾಟದಿಂದ ತಪ್ಪಿಸೋದಕ್ಕೆ ಸುತ್ಲು ಮುಳ್ಳಿನ ಪೊದೆಯನ್ನ ನಿರ್ಮಿಸುತ್ತಾರೆ
ನೀರಿನ ಅಭಾವ ಉಂಟಾಗಿ ಗಿಡಗಳಿಗೆ ತೊಂದರೆಯಾಗುತ್ತೆ ಎಂದು ಅನಿಸಿದಾಗ, ಹೆಚ್ಚಾಗಿ ಮುಂಗಾರು ಮಳೆ ಬೀಳೋ ಸಮಯದಲ್ಲಿ ಮಳೆಯಲ್ಲೇ ಹೋಗಿ ಗಿಡಗಳನ್ನು ನೆಟ್ಟು ಬರ್ತಾರೆ. ಚೆನ್ನಾಗಿ ಗಿಡಗಳ ಬೆಳೆಯುತ್ತೆ.
ತಿಮ್ಮಕ್ಕ ಅವರ ಪತಿ 1991ರಲ್ಲಿ ಮೃತಪಡ್ತಾರೆ
ತುಂಬಾ ದುಃಖದಲ್ಲಿ ಇರ್ತಾರೆ
ದುಃಖದಿಂದ ಹೊರಬ ಬರೋದಕ್ಕೂ ಕೂಡ ತನ್ನ ಮಕ್ಕಳಂತೆ ಸಾಕಿದ ಗಿಡಗಳನ್ನುಪೋಷಿಸಿ ಮತ್ತೂ ಗಿಡಗಳನ್ನ ನೆಡ್ತಾರೆ
ಸಾಲು ಮರದ ತಿಮ್ಮಕ್ಕ ಈ ರೀತಿ ತಮ್ಮ ಸ್ವಂತ ಖರ್ಚಿನಲ್ಲಿ 8000 ಸಸಿಗಳನ್ನು ನೆಟ್ಟಿದ್ದಾರೆ.
ಇವತ್ತಿಗೆ ಅವುಗಳ ಮೌಲ್ಯ ಸುಮಾರು 15ಕ್ಕೂ ಲಕ್ಷ ಜಾಸ್ತಿ ಅಂತ ಅಂದಾಜು ಮಾಡಲಾಗಿದೆ.
ಆದರೆ ಸ್ನೇಹಿತರೇ ತಿಮ್ಮಕ್ಕನ ಕೆಲಸಕ್ಕೆ ಬೆಲೆ ಕಟ್ಟೋಕಗಲ್ಲ
ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ. ಅನಕ್ಷರಸ್ಥೆಯಾಗಿದ್ದರೂ ತಿಮ್ಮಕ್ಕ ಪರಿಸರ ಸಂರಕ್ಷಣೆಯಲ್ಲಿ ಮಹತ್ಕಾರ್ಯ ಮಾಡಿದ್ದಾರೆ ಹಲವು ಪ್ರತಿಭಟನೆಗಳಲ್ಲೂ ಪಾಲ್ಗೊಂಡಿದಾರೆ
2019 ರಲ್ಲಿ ಮಂಡ್ಯ ಜಿಲ್ಲೆಯ ಬಾಗೇಪಲ್ಲಿ-ಹಲಗೂರು ರಸ್ತೆಯಲ್ಲಿ ಹೆದ್ದಾರಿ ಅಗಲೀಕರಣಕ್ಕಾಗಿ385 ಮರಗಳನ್ನು ಕಡಿಯುವ ಪ್ರಸ್ತಾಪವಿತ್ತು . ಆದ್ರೆ ತಿಮ್ಮಕ್ಕ ಅವರು ವಿರೋಧ ವ್ಯಕ್ತಪಡಿಸಿದ್ದರು. ತಿಮ್ಮಕ್ಕ ಅವರ ಒತ್ತಡಕ್ಕೆ ಮಣಿದ ಸರ್ಕಾರವು ಪರ್ಯಾಯ ಮಾರ್ಗಗಳತ್ತ ಮುಖ ಮಾಡಿತು, ಇದರಿಂದ 70 ವರ್ಷಗಳ ಕಾಲ ಸಾಕಿದ್ದ 385 ಮರಗಳ ಜೀವ ಉಲಿತು
ಪರಿಸರಕ್ಕೆ ತಿಮ್ಮಕ್ಕ ನೀಡಿರುವ ಕೊಡುಗೆಯನ್ನು ಗಮನಿಸಿ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಪುರಸ್ಕರಿಸಿವೆ.
ಭಾರತ ಸರ್ಕಾರ 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಾಗಳಲ್ಲಿ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಗೆ ತಿಮ್ಮಕ್ಕ ಹೆಸರನ್ನು ಇಡಲಾಗಿದೆ.
1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ,
1997ರಲ್ಲಿ ವೃಕ್ಷಮಿತ್ರ ಪ್ರಶಸ್ತಿ,
1997ರಲ್ಲಿ ವೀರಚಕ್ರ ಪ್ರಶಸ್ತಿ.
ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು ಇವರಿಂದ ಶ್ಲಾಘನೆಯ ಪ್ರಮಾಣ ಪತ್ರ
2000ದಲ್ಲಿ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ,
2004ರಲ್ಲಿ ಪಂಪಾಪತಿ ಪರಿಸರ ಪ್ರಶಸ್ತಿ,
2010ರಲ್ಲೀ ಹಂಪಿ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ
ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ,
ವನಮಾತೆ ಪ್ರಶಸ್ತಿ,
ಶ್ರೀಮಾತಾ ಪ್ರಶಸ್ತಿ,
ಕರ್ನಾಟಕ ಪರಿಸರ ಪ್ರಶಸ್ತಿ,
ನ್ಯಾಷನಲ್ ಸಿಟಿಜನ್ ಪ್ರಶಸ್ತಿ,
ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳನ್ನ ವೃಕ್ಷಮಾತೆ ತಿಮ್ಮಕ್ಕ ಮುಡಿಗೆರಿಸಿಕೊಂಡಿದಾರೆ
2016 ರಲ್ಲಿ, ಬಿಬಿಸಿ ತಿಮ್ಮಕ್ಕ ಅವರನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕ ಮಹಿಳೆಯರಲ್ಲಿ ಒಬ್ಬರು ಎಂದು ಪಟ್ಟಿ ಮಾಡಿದೆ. ಈ ವರ್ಷದ ಆರಂಭದಲ್ಲಿ ಕರ್ನಾಟಕ ಸರ್ಕಾರವು ತಿಮ್ಮಕ್ಕ ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ನೀಡಿದೆ. ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯಾಗಿ ನೇಮಕ ಮಾಡಿದೆ.
ತಿಮ್ಮಕ್ಕ ಅವರಿಗೆ 110 ವರ್ಷ ವಯಸ್ಸಾಗಿದ್ದು, ಇಂದಿಗೂ ತಮ್ಮ ಆರೋಗ್ಯ ಸಮಸ್ಯೆಗಳ ಬದಿಗೊತ್ತಿ ಕಾಲೇಜುಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಸಂದೇಶಗಳನ್ನು ನೀಡುತ್ತಿದ್ದಾರೆ.
ಸಾಧನೆ ಮಾಡಲು ಯಾವುದೇ ಪದವಿ, ನೆರವು, ಅವಕಾಶದ ಅಗತ್ಯವಿಲ್ಲ. ಕಾಯಕನಿಷ್ಠೆ ಇಟ್ಟುಕೊಂಡು ಎಲ್ಲರಿಗೂ ಒಳ್ಳೆಯದು ಮಾಡಬೇಕು ಎಂಬ ಧ್ಯೇಯ ಇದ್ದರೆ ಜಗತ್ತನ್ನೆ ಬದಲಾವಣೆ ಮಾಡುವ ಶಕ್ತಿ ಆಗಬಹುದು ಎಂಬುದಕ್ಕೆ ತಿಮ್ಮಕ್ಕ ನಿದರ್ಶನವಾಗಿದ್ದಾರೆ.
ತಿಮ್ಮಕ್ಕ ಅವರು ತಮಗೆ ತಾವೇ ಅವಕಾಶ ಮಾಡಿಕೊಂಡು ಸಾಧನೆ ಮಾಡಿದ ಮಹಿಳೆಯಾಗಿದ್ದಾರೆ. ಅವರ ಸಾಧನೆ ಚಿರಸ್ಥಾಯಿ ಆಗಿರಲಿದೆ.
🌞 ಜೈ ಕರ್ನಾಟಕ ಜೈ ಹಿಂದ್ ಜೈ ಹಿಂದೂ ರಾಷ್ಟ್ರ ಜೈ ಪ್ರಜಾಕೀಯ🌞
ಈ Video ಇಷ್ಟ ಆದ್ರೆ Like👍 ಮಾಡಿ
ನಿಮ್ಮ Family /Friends ಗೆ Share ⏩ಮಾಡಿ
ನಿಮ್ಮ ಅನಿಸಿಕೆಗಳನ್ನು comment📜 ಮಾಡಿ ತಿಳಿಸಿ
✨✨✨✨✨✨✨✨✨✨✨✨✨✨✨✨
ನಮ್ಮ ಪ್ರಯತ್ನ ಕ್ಕೆ ನಿಮ್ಮ ಹಾರೈಕೆ ಇರಲಿ🙏
Vinay hegde
[ Ссылка ]
✨✨✨✨✨✨✨✨✨✨✨✨✨✨✨✨
ನಾವು ಸಿಗುವ ಸ್ಥಳಗಳು:😊
Wetube Kannada facebook :
[ Ссылка ]
✨✨✨✨✨✨✨✨✨✨✨✨✨✨✨✨
ವಾರಕ್ಕೆ ಒಂದು ವಿಡಿಯೋ !!
Weekend With WeTube
🔔🔔🔔🔔🔔🔔SUBSCRIBE ಆಗಿ🔔🔔🔔🔔🔔
👍👍👍👍👍👍👍LIKE ಮಾಡಿ 👍👍👍👍👍👍
🙏 ಕನ್ನಡಿಗರೇ ಕನ್ನಡಿಗರನ್ನ ಬೆಳೆಸಿ ಉಳಿಸಿ ಹಾರೈಸಿ 🙏
Thanks Pixabay🙏😊
Video by
[ Ссылка ]
Video by
[ Ссылка ]
Video by
[ Ссылка ]
Video by
[ Ссылка ]
Video by
[ Ссылка ]
Video by
[ Ссылка ]
Video by
[ Ссылка ]
Video by
[ Ссылка ]-
Ещё видео!