Jeeva Nadi Kannada Movie Song: Kannada Naadina - HD Video
Actor: Vishnuvardhan, Kushboo
Music: Koti
Singer: Anuradha Paudwal, SPB
Lyrics: R N Jayagopal
Year :1996
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Jeevanadi – ಜೀವನದಿ 1996*SGV
Kannada Nadina Jeevanadi Ee Kaveri Song Lyrics In Kannada:
ಹೆಣ್ಣು : ಆ....ಆ....ಆ....ಆ....ಆ....ಆ.... ಆ....ಆ....ಆ....ಆಆಆ.... ಆ....ಆ....ಆ....
ಕನ್ನಡ ನಾಡಿನ ಜೀವನದೀ ಈ ಕಾವೇರಿ.. ಓಓಓ.. ಜೀವನದೀ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ.. ಓಓಓ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೇ ಸಂತೋಷದಾ ಸಕ್ಕರೇ ಮಮತೆಯಾ ಮಾತೆಗೆ
ಭಾಗ್ಯದಾ ದಾತೆಗೆ ಮಾಡುವೆ ಭಕ್ತಿಯಾ ವಂದನೇ.. ಓಓಓ...
ಕನ್ನಡ ನಾಡಿನ ಜೀವನದೀ ಈ ಕಾವೇರಿ ಓಓಓ.. ಜೀವನದೀ ಈ ಕಾವೇರಿ
ಹೆಣ್ಣು : ಪ್ರೇಮದಿ ಕಾವೇರಿ ಹರಿವಳು ನಲಿವಿಂದ ಸಾಗರದೆಡೆ ಓಡಿ ಸಂಗಮಕೆ
ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು ಜೀವಗಳೊಂದಾದ ಸಂಭ್ರಮದೀ
ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ
ಸ್ಪರ್ಶದ ಆ ಸುಖದ ಕಲ್ಪನೆ ತಂದಿದೆ ಏನೋ ರೋಮಾಂಚನ
ಯಾವಾ ಬಂಧವೋ, ಸೃಷ್ಟಿ ಸ್ಪಂದವೋ ಆಯಸ್ಕಾಂತದ ಸೆಳೆತವೋ
ಹರೆಯದ ತುಡಿತವೋ ಮನಸೂ ತೇಲಾಡಿದೆ...
ಕನ್ನಡ ನಾಡಿನ ಜೀವನದೀ ಈ ಕಾವೇರಿ.. ಓಓಓ.. ಜೀವನದೀ ಈ ಕಾವೇರಿ
ಗಂಡು : ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು ಹೊಮ್ಮಿದೆ ಭೋರೆಂದೂ ವಿರಹದಲಿ
ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ ಕಾದಿದೆ ನೋಡೆಂದೂ ತವಕದಲಿ
ಹೆಣ್ಣು : ಲಜ್ಜೆಯು ಅಳಿಯದು ಮೀರುತಾ ಸಾಗಿಸಿ ಸಾಗರ ಹರಸಿದೆ ತನ್ನನೆ ಮರೆತು,
ಕಡಲಲೆ ಬೆರೆತು ಧನ್ಯವು ತಾನಾಗಿದೆ
ಗಂಡು : ಪ್ರಕೃತಿ ನಿಯಮವೋ, ಪ್ರೇಮದ ಧರ್ಮವೋ
ಹೆಣ್ಣು : ಬಳಿ ಸೇರುತ ಓಡುವ ಅಲೆಯ ತಲೆಯಲಿ ಪ್ರೇಮಾ ಹಾಡಾಗಿದೆ
ಗಂಡು : ಕನ್ನಡ ನಾಡಿನ ಜೀವನದೀ ಈ ಕಾವೇರಿ ಓಓಓ ಜೀವನದೀ ಈ ಕಾವೇರಿ
ಹೆಣ್ಣು : ಅನ್ನವ ನೀಡುವ ದೇವನದಿ ಈ ವಯ್ಯಾರಿ ಓಓಓ ಸುಖವ ತರೋ ಈ ಸಿಂಗಾರಿ
ಗಂಡು : ಈ ತಾಯಿಯೂ ನಕ್ಕರೇ ಹೆಣ್ಣು : ಸಂತೋಷದಾ ಸಕ್ಕರೇ
ಇಬ್ಬರು : ಮಮತೆಯಾ ಮಾತೆಗೇ ಭಾಗ್ಯದಾ ದಾತೆಗೇ
ಮಾಡುವೆ ಭಕ್ತಿಯಾ ವಂದನೇ....ಏ.... ಓಓಓಓಓ .ಓ.....
Ещё видео!