Ugadi Movie Song: Preethisuve Ninna Preethisuve - HD Video
Actor: Ravichandran, Kamna Jethmalani
Music: R P Patnayak
Singer: Rajesh Krishnan, K.S.Chithra
Lyrics: K Kalyan
Year :2007
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Ugadi – ಯುಗಾದಿ 2007*SGV
Preethisuve Ninna Preethisuve Song Lyrics In Kannada
ಗಂಡು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ಗಂಡು : ಈ ವಯಸಿಗೆ... ಶೃತಿಯಾಗೊ ನಗುವಿದು
ಹೆಣ್ಣು : ಈ ನಗುವಿಗೆ... ಬೆಳಕಾಗೊ ಕನಸಿದು
ಗಂಡು : ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ
ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ಗಂಡು : ನಿನ್ನ ಈ ನೆನಪಿನಲ್ಲೇ ಸವಿ ನೆನಪಿನ ಸವಿ ನೆರಳಿನಲ್ಲೇ
ಕಣ ಕಣ ಪ್ರತಿ ಕ್ಷಣ ಕ್ಷಣ ನಾ ಕರಗುವೆ ನಿನ್ನಲ್ಲೇ
ಹೆಣ್ಣು : ನಿನ್ನ ಈ ನೋಟದಲ್ಲೇ ಕಣ್ಣೋಟದ ಬಾಣದಲ್ಲೇ
ನಿಂತರೂ ನಿಲ್ಲಲಾರದೆ ನಾ ಒರಗಿದೆ ಎದೆಯಲೆ
ಗಂಡು : ಎದೆ ತುಂಬಿ ಹಾಡುವೆ ಲೋಕ ಮರೆತು ಹೋಗುವೆ
ಹೆಣ್ಣು : ಎಷ್ಟೇ ಜನ್ಮ ಬಂದರೂ ನಿನ್ನ ಪ್ರೀತಿ ಕಾಯುವೆ
ಗಂಡು : ಬೇರೆ ಏನು ಬೇಕು ಪ್ರೇಮಿಗೆ
ಹೆಣ್ಣು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಗಂಡು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ಹೆಣ್ಣು : ತಿರುಗುವ ಭೂಮಿ ಕೂಡ ಇಲ್ಲಿ ತಿರುಗದೇ ನಿಂತು ಬಿಡಲಿ
ಕಾಲವು ನಮ್ಮ ಕೈಯಲಿ ಕುಂತು ಸೆರೆಯಾಗಲಿ
ಗಂಡು : ಬರಲಿರೋ ನಾಳೆಗಳಿಗೆ ನಾವ್ ಬರೆಯುವ ಒಳ್ಳೆ ಘಳಿಗೆ
ನಂಬಿದ ಪ್ರತಿ ಹೆಜ್ಜೆಗೆ ನಮಗುಂಟು ಹೂ ಹಾಸಿಗೆ
ಹೆಣ್ಣು : ನಿನ್ನ ಒಂದು ಮಾತಿಗೆ ಜೀವ ಕೊಟ್ಟು ಬಾಳುವೆ
ಗಂಡು : ಇಂಥ ನಿನ್ನ ಪ್ರೀತಿಗೆ ಏಳು ಲೋಕ ಗೆಲ್ಲುವೆ
ಹೆಣ್ಣು : ಸೋಲೊ ಮಾತೆ ಇಲ್ಲ ಪ್ರೀತಿಗೆ
ಗಂಡು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
ಗಂಡು : ಈ ವಯಸಿಗೆ ಶೃತಿಯಾಗೊ ನಗುವಿದು
ಹೆಣ್ಣು : ಈ ನಗುವಿಗೆ ಬೆಳಕಾಗೊ ಕನಸಿದು
ಗಂಡು : ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ
ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಹೆಣ್ಣು : ಅರ್ಪಿಸುವೆ ನನ್ನ ಅರ್ಪಿಸುವೆ ನನ್ನೀ ಹೃದಯದ ಆಣೆ
Ещё видео!