Kannada Movie: Shrungara Kavya
Song: O Meghave Meghave Hogi Baa - HD Video.
Actor: Raghuveer, Sindhu
Music: Hamsalekha
Singer: SPB, K.S.Chithra
Lyrics: Hamsalekha
Director: S Mahendar
Year:1993
O Meghave Meghave Hogi Baa Kannada Song Lyrics In Kannada
ಗಂಡು : ಓಹೊಹೊ ಓಹೊ ...ಓಹೊಹೊ ಓಹೊ ಅಹಹಾ ಹಹ ಅಹಹಾ ಹಹ
ಹೆಣ್ಣು : ಓಹೊಹೊ ಓಹೊ ...ಓಹೊಹೊ ಓಹೊ ಅಹಹಾ ಹಹ ಅಹಹಾ ಹಹ
ಗಂಡು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ
ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ
ಹೆಣ್ಣು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವನಿಗೆ ನೀಡಿ ಬಾ
ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ..
ಗಂಡು : ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ
ಗಂಡು : ಮುಗಿಲ ಬಾನಗಲ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳತಿ ಓದುವೆಯ
ಹೆಣ್ಣು : ಮುಗಿಲ ಬಾನಗಳ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳೆಯ ಓದುವೆಯ
ಗಂಡು : ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ
ಹೆಣ್ಣು : ಇದು ಓದೋ ಓಲೆಯಲ್ಲ ಬರೆದುಕೊ ನನ್ನ ಜೀವ ನಿನ್ನದೆ ಎಂದುಕೋ
ನಿನ್ನ ಮನದ ಮನೆಗೆ ತಂದುಕೋ
ಗಂಡು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
ಓ ಮೇಘವೇ ಮೇಘವೆ ವಂದನೆ ಸಂಧಾನದ ಪಾತ್ರಕೆ ವಂದನೆ
ಹೆಣ್ಣು : ಮುಗಿಲೆ ಬೆಳ್ಮುಗಿಲೆ ತಂಬೆಲರೆ ತಳಿರೆ ಹಗಲೇ ಹಗಲಿರುಳೆ ನಿನ್ನೆದುರು ನಾವೊಬ್ಬರೆ
ಗಂಡು : ವನವೇ ಕಾನನವೇ ಹೂಬನವೇ ಹಸಿರೇ ಗಿರಿಯೇ ನೀರ್ಝರಿಯೇ ನಮ್ಮೊಳಗೇ ನಿನ್ನುಸಿರೇ
ಹೆಣ್ಣು : ಈ ಒಲವಿನ ಕಣ್ಣಲಿ ಸರ್ವವೂ ಸುಂದರ
ಗಂಡು : ಇಲ್ಲಿ ಬಾನು ಭೂಮಿಗಿಲ್ಲ ಅಂತರ ನಾನು ನೀನು ಇಲ್ಲ ನಮ್ಮಲಿ ಒಂದೇ ಜೀವ ಜೋಡಿ ಒಡಲಲಿ
ಹೆಣ್ಣು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
ಓ ಮೇಘವೇ ಮೇಘವೆ ವಂದನೆ ಸಂಧಾನದ ಪಾತ್ರಕೆ ವಂದನೆ
ಗಂಡು : ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
ಹೆಣ್ಣು : ಓ ಮೇಘವೇ ಮೇಘವೆ ವಂದನೆ
ಗಂಡು : ಸಂಧಾನದ ಪಾತ್ರಕೆ ವಂದನೆ
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Shrungara Kavya – ಶೃಂಗಾರ ಕಾವ್ಯ 1993*SGV
Ещё видео!