Bhaktha Kumbara Kannada Movie Song: Manava Dehavu Moole Mamsada Tadike - HD Video
Actor: Dr Rajkumar, Leelavathi
Music: G K Venkatesh
Singer: PB Srinivas
Lyrics: Hunsur Krishnamurthy
Director: Hunsur Krishnamurthy
Year :1974
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Bhaktha Kumbara – ಭಕ್ತ ಕುಂಬಾರ1974*SGV
Manava Dehavu Song Lyrics In Kannada
ಪರತತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮ ಒಂದುಳಿದು ನನಗೇನು ತಿಳಿದಿಲ್ಲಾ... ನನಗೇನು ತಿಳಿದಿಲ್ಲಾ
ಮಾನವ ದೇಹವು ಮೂಳೆ ಮಾಂಸದ ತಡಿಕೇ
ಮಾನವ ಮೂಳೆ ಮಾಂಸದ ತಡಿಕೇ
ಇದರ ಮೇಲಿದೇ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೇ...
ಮಾನವ ಮೂಳೆ ಮಾಂಸದ ತಡಿಕೇ
ನವ ಮಾಸಗಳು ಹೊಲಸಲಿ ಕಳೆದು, ಅ ಆ ...
ನವ ರಂಧ್ರಗಳಾ ಕಳೆದೂ ಬೆಳೆದೂ
ಬಂದಿದೆ ಭುವಿಗೇ ಈ ನರ ಗೊಂಬೇ
ನಂಬಲು ಏನಿದೇ ಸೌಭಾಗ್ಯವೆಂದೇ
ಮಾನವ ಮೂಳೆ ಮಾಂಸದ ತಡಿಕೇ
ದೇಹವೂ ಮೂಳೆ ಮಾಂಸದ ತಡಿಕೇ
ಉಸಿರಾಡುವ ತನಕ, ನಾನು ನನದೆಂಬ ಮಮಕಾರ
ನಿಂತ ಮರುಗಳಿಗೆ, ಮಸಣದೆ ಸಂಸ್ಕಾರ
ಮಣ್ಣಲಿ ಬೆರೆತೂ, ಮೆಲ್ಲಗೆ ಕೊಳೆತೂ
ಮುಗಿಯುವ ದೇಹಕೇ ವ್ಯಾಮೋಹವೇಕೇ
ಮಾನವ ಮೂಳೆ ಮಾಂಸದ ತಡಿಕೇ
ದೇಹವೂ ಮೂಳೆ ಮಾಂಸದ ತಡಿಕೇ
ಬರುವಾಗ ಬೆತ್ತಲೇ, ಹೋಗುವಾಗ ಬೆತ್ತಲೇ
ಬಂದು ಹೋಗುವ ನಡುವೇ, ಬರೀ ಕತ್ತಲೇ
ಭಕ್ತಿಯ ಬೆಳಕೂ, ಬಾಳಿಗೆ ಬೇಕೂ
ಮುಕ್ತಿಗೆ ವಿಠ್ಠಲನ ಕೊಂಡಾಡ ಬೇಕೂ
ಮಾನವ ಮೂಳೆ ಮಾಂಸದ ತಡಿಕೇ
ದೇಹವು ಮೂಳೆ ಮಾಂಸದ ತಡಿಕೇ
ಇದರ ಮೇಲಿದೇ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೇ
ಮಾನವ ಮೂಳೆ ಮಾಂಸದ ತಡಿಕೇ
ವಿಠ್ಠಲ ವಿಠ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ವಿಠ್ಠಲ ಪಾಂಡುರಂಗ ವಿಠ್ಠಲ
ವಿಠ್ಠಲ ವಿಠ್ಠಲ ಪಾಂಡುರಂಗ ವಿಠ್ಠಲ
ಪಾಂಡುರಂಗ ವಿಠ್ಠಲ ಪಾಂಡುರಂಗ ವಿಠ್ಠಲ
ಜೈ ಪುಂಡಲೀಕ ವರದೇ ಹರೀ ವಿಠ್ಠಲೇ
-------------------------------------------------
Ещё видео!