[ Ссылка ]
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ಬಂಗಾರವಿಡಬಾರೇ ನಿನಗೊಪ್ಪುವ ಬಂಗಾರವಿಡಬಾರೇ || ಪ ||
ರಂಗನಾಥನ ದಿವ್ಯ ಮಂಗಳನಾಮವೆಂಬ ಬಂಗಾರವಿಡಬಾರೇ || ಅಪ ||
ಕಸ್ತೂರಿಯ ಬಟ್ಟನಿಡೇ | ನಿನ್ನ ಫಣೆಗೆ | ಕಸ್ತೂರಿಯ ಬಟ್ಟನಿಡೇ ||
ಹೆತ್ತವರ ಕುಲಕೆ | ಕುಂದು ಬಾರದ ಹಾಗೆ | ಮುತ್ತಿನ ಮೂಗುತಿಯನ್ನಿಡೇ ||
ಕರ್ತೃಪತಿಯ ಮಾತ ಮೀರಬಾರದು ಎಂಬ ಮುತ್ತಿನ್ವಾಲೆಕೊಪ್ಪನ್ನಿಡೇ |
ನಿನ್ನ ಕಿವಿಗೆ ಮುತ್ತಿನ್ವಾಲೆಕೊಪ್ಪನ್ನಿಡೇ || ಹತ್ತು ಮಂದಿಯ ಕೈಯಲ್ಲಿ ಹೌದೌದೆನ್ನಿಸಿಕೊಂಬ ಮಸ್ತಕ ಮಕುಟವಿಡೇ || ೧ ||
ಅರೆಘಳಿಗೇ ಪತಿಯ | ಅಗಲಬಾರದು ಎಂಬ | ಅಚ್ಚ ಮಂಗಳಸೂತ್ರ ಕಟ್ಟೆ |
ನಿನ್ನ ಕೊರಳಿಗೆ ಅಚ್ಚ ಮಂಗಳಸೂತ್ರ ಕಟ್ಟೇ | ಪರಮಪುರುಷನು ನಿನ್ನ ಪಡೆದ ತಂದೆಯೆಂಬ
ಪದಕಸರವ ಹಾಕೇ || ಕರೆದೊಬ್ಬರಿಗೆ ಅನ್ನವಿಕ್ಕುವೆನೆಂತೆಂಬ ಹರಡಿ ಕಂಕಣವನಿಡೇ |
ನಿನ್ನ ಕೈಗೆ ಹರಡಿ ಕಂಕಣವನಿಡೇ | ನೆರೆಹೊರೆಯವರೆಲ್ಲ ಸರಿಸರಿಯೆಂಬಂಥ ಬಿರುದಿನೊಡ್ಯಾಣವಿಡೇ || ೨ ||
ಮಾನ ಹೊರಗೆ ಬಿಚ್ಚೇನೆಂಬ ಕಂಭಾವತಿಯ | ನೇಮದ ಮಡಿಯನುಡೇ | ನಿನ್ನ ಮೈಗೆ |
ನೇಮದ ಮಡಿಯನುಡೇ || ಹೀನಗುಣವ ಬಿಟ್ಟು ಹಿತದಲ್ಲಿದ್ದೇನೆಂಬ | ಹೆಚ್ಚಿನ ಕುಪ್ಪಸವ ತೊಡೇ ||
ಜ್ಞಾನನಿಧಿಗಳಾದ ಗುರುಗಳ ಪಾದಕ್ಕೆ ಆನತಳಾಗಿ ಬಾಳೇ | ಗುರುಗಳ ಪಾದಕ್ಕಾನತಳಾಗಿ
ಬಾಳೇ || ಮೌನಿಗಳೊಡೆಯ ಶ್ರೀಪುರಂದರ ವಿಠಲನ ಪ್ರೇಮಶರಗೀಲಿ ಕಟ್ಟೆ || ೩ ||
baMgaaraviDabaarE ninagoppuva baMgaaraviDabaarE || pa ||
raMganaathana divya maMgaLanaamaveMba baMgaaraviDabaarE || apa ||
kastUriya baTTaniDE | ninna PaNege | kastUriya baTTaniDE ||
hettavara kulake | kuMdu baarada haage | muttina mUgutiyanniDE ||
kartRupatiya maata mIrabaaradu eMba muttinvaalekoppanniDE |
ninna kivige muttinvaalekoppanniDE || hattu maMdiya kaiyalli houdoudennisikoMba mastaka makuTaviDE || 1 ||
areGaLigE patiya | agalabaaradu eMba | acca maMgaLasUtra kaTTe |
ninna koraLige acca maMgaLasUtra kaTTE | paramapuruShanu ninna paDeda taMdeyeMba
padakasarava haakE || karedobbarige annavikkuveneMteMba haraDi kaMkaNavaniDE |
ninna kaige haraDi kaMkaNavaniDE | nerehoreyavarella sarisariyeMbaMtha birudinoDyaaNaviDE || 2 ||
maana horage biccEneMba kaMbhaavatiya | nEmada maDiyanuDE | ninna maige |
nEmada maDiyanuDE || hInaguNava biTTu hitadalliddEneMba | heccina kuppasava toDE ||
j~jaananidhigaLaada gurugaLa paadakke AnataLaagi baaLE | gurugaLa paadakkaanataLaagi
baaLE || mounigaLoDeya shrIpuraMdara viThalana prEmasharagIli kaTTe || 3 ||
Ещё видео!