Tittle : Srinivasa Manniso..
LYRICS ; Venkatanatha ( Sri M. V . Madhusudhan )
Music and Rendition : Raichur Sheshagiri Das
*********************************
ಶ್ರೀನಿವಾಸ ಮನ್ನಿಸೋ ll ಪ ll
ನಿನ್ನ ದಾಸರ ದಾಸರೊಳೆನ್ನ ನಮ್ಮವನಿವನೆನ್ನಿಸೋ ll ಅ ll
ಏಳು ಬೆಟ್ಟದ ಒಡೆಯ l
ಕೇಳಬಾರದೇ ಮೊರೆಯ l
ಏಳುಬೀಳಿನ ನಡೆಯ l
ತಾಳಲಾರೆನೊ ಹೊರೆಯ l
ವಿರಳ ಜ್ಞಾನದ ತಿರುಳನರಿಯದೆ ಇರುಳ ಮತಿಯೊಳು ಬಳಲಿದೆನಯ್ಯ l
ಕಾಳುಕಂಬಳಿಗೆ ಕಾಲವಕಳೆಯುತ ಹಾಳು ಹರಟೆಯೊಳು ಮುಳುಗಿದೆನಯ್ಯ ll 1 ll
ಕರುಣಾಭರಣನೇ l
ಶರಣವತ್ಸಲನೇ l
ಸ್ಮರಣೆಯ ತೊರೆದು l
ನಿನ್ನ ಚರಣವ ಮರೆತೆನೆ ll
ಪೂರ್ವದ ಕರ್ಮ ಎನ್ನ ದಹಿಸೊ ಮುನ್ನ ಗಮನಹರಿಸೋ ಘನ್ನಮಹಿಮ್ಮ l
ರಮಾರಮಣ ಕರುಣಾಸಂಪನ್ನ ಋಣಹರಣ ಮಾಡಿ ರಕ್ಷಿಸೋ ಇನ್ನ ll 2 ll
ಕಡಲಶಯನನೇ ನಿನ್ನ l
ಅಡಿಗೆರಗುವೇ ಇನ್ನ l
ನುಡಿಯತಪ್ಪುವ ಮುನ್ನ l
ಕೈಯ್ಯ ಹಿಡಿಯೋ ಎನ್ನ ll
ಮಡುವಿನೊಳು ಬಾಯ್ಬಿಬಿಡುತಲಿ ನೊಂದು
ಬಿಡುಗಡೆಯ ಸಿರಿ ಪಡೆಯುವುದೆಂದು l
ತಡಮಾಡದೆ ದಡಸೇರಿಸೋ ಬಂದು
ಮೃಡಸಖ ವೆಂಕಟನಾಥ ನೀ ಬಂಧು ll 3 ll
**********************************
Recorded at Hamsalekha Studio / Omkar Studio
All rights reserved.
© & ℗ Copyright & Produced by : Raichur Sheshagiri Das
Published by : Raichur Sheshagiri Das
Ещё видео!