ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ದೇವಕಿಗೆ ಸಂತಸವನೀಯುವ ನಂದಗೋಪನ ಕಂದನೆ
ವೃಂದಾವನದೊಳು ಮುದದಿ ನೆಲೆಸಿದ ಗೋಕುಲದ ತಂಗದಿರನೆ ||೧||
ಕಂದ ಫಲಗಳ ಸವಿದವನೆ ಲೋಕೈಕ ಸುಂದರ ಮೂರುತಿ
ಹಸುಗಳನೆ ಕಾಯ್ದವನೆ ಎಲ್ಲರು ಮಣಿದ ಪಾದವು ನಿನ್ನದು ||೨||
ಪಾರ್ಥನಿಗೆ ಸಾರಥ್ಯವಹಿಸಿದೆ ಕೈಲಿ ಕೂರಸಿ ನಂದಕ
ಚಂದನದಿ ಚೆಲುಗೊಂಡ ದೇಹನೆ ಚೆಲುವೆಯರ ಮನದನ್ನನೆ ||೩||
ತಾವರೆಯ ನಡುವೆಸಳಿನಂದದಿ ಚೆಲುವ ಕಣ್ಗಳ ಚೆನ್ನನೆ
ಮಂದರವ ಹೊತ್ತವನೆ ಓಹೋ ವಂದಿಸುವೆ ಗೋವಿಂದನೆ ||೪||
ಪ್ರಳಯ ಕಾಲದ ಕಪ್ಪು ಕಡಲಲಿ ಮೀನ ರೂಪದಿ ವಿಹರಿಸಿ
ವೇದಗಳ ತಂದಿತ್ತ ನಾಥನೆ ನಿನಗೆ ಮಣಿವನು ನಾಲ್ಮೊಗಂ ||೫||
ಕೂರ್ಮ ರೂಪವ ತಳೆದು ಬೆನ್ನಲಿ ಮಂದರಾದ್ರಿಯ ಧರಿಸಿದೆ
ಎಲ್ಲ ಲೋಕಗಳನ್ನು ಹೊತ್ತಿಯ ನೀನು ಸುರರಿಗೂ ಆಸರೆ ||೬||
ತಳೆದು ಸೂಕರದಂಥ ರೂಪವ ದಾನವನ ತರಿದಾತನೇ
ಭೂಮಿಯನು ಹೊತ್ತವನೆ ನೆಲೆಸಿವೆ ಯಜ್ಞಗಳು ನಿನ್ನಂಗದಿ ||೭||
ಓ ದೇವ ನರಸಿಂಹ ರೂಪನೆ ರಿಪುವ ಸೀಳಿದ ವೀರನೆ
ಎಲ್ಲ ಭಯವನು ಕಳೆವ ನೀನಲ ಸಗ್ಗಿಗರ ಸಂಬಂಧಿಕ ||೮||
ಚೆಲುವ ವಾಮನ ರೂಪ ವಿಪ್ರರ ವಟುವಿನಂತವತರಿಸಿದೆ
ದೈತ್ಯ ಕುಲ ಸಂಹಾರ ನೀನಲ ಸುರರ ಸೌಖ್ಯದ ಕಾರಣ ||೯||
ಭೃಗುಕುಲೋತ್ತಮ ಕೊಡಲಿ ರಾಮನೆ ಬೆಳಗುತಿಹ ತೇಜಸ್ವಿಯೇ
ಕ್ಷತ್ರಿಯರ ಕುಲ ತರಿದ ವೀರನೆ ನಿನ್ನ ಕಿಂಕರ ಶಂಕರ ||೧೦||
ರಘುಕುಲೋದ್ಭವ ರಾಮಚಂದ್ರನೆ ರಾಕ್ಷಸರ ಸಂಹಾರನೆ
ನೀನು ಹನುಮನ ಸ್ವಾಮಿ ಸೀತೆಯ ಬಗೆಯ ಕದ್ದ ಮನೋಹರ ||೧೧||
ದೇವಕಿಯೊಳವತರಿಸಿರುವ ಲೋಕೈಕ ಸುಂದರ ಮೂರುತಿ
ರುಕ್ಮಿಣಿಯ ಕೈ ಹಿಡಿದ ನೀನಲ ಪಾಂಡವರ ಹಿತ ಬಾಂಧವ ||೧೨||
ದೈತ್ಯರಿಗೆ ಮೋಹವನು ಬರಿಸಿದ ನಿತ್ಯ ಸುಖದಾತಾರನೆ
ಬುದ್ಧ ರೂಪನೆ ದೇವ ನೀನಲ ತಿಳಿವ ಕರುಣಿಸುವಾತನೆ ||೧೩||
ದುಷ್ಟ ಕುಲವನು ತರಿದು ಕೊಲ್ಲುತ ಧರ್ಮವನು ಬೆಳಗಿಸುತಲಿ
ಕೃತಯುಗಕೆ ಬೀಜವನು ಬಿತ್ತುವ ಕಲ್ಕಿ ರೂಪನೆ ವಂದನಂ ||೧೪||
ಮಧ್ವ ಮುನಿ ಬರೆದಂಥ ದೇವನ ಗುಣವ ಹಾಡುವ ಗೀತವು
ತಾಪಗಳ ಪರಿಹರಿಸಿ ಮಂಗಳ ನಿತ್ಯ ಸುಖವನ್ನೀವುದು ||೧೫||
dEvakige saMtasavanIyuva naMdagOpana kaMdane
vRuMdaavanadoLu mudadi nelesida gOkulada taMgadirane ||1||
kaMda PalagaLa savidavane lOkaika suMdara mUruti
hasugaLane kaaydavane ellaru maNida paadavu ninnadu ||2||
paarthanige saarathyavahiside kaili kUrasi naMdaka
caMdanadi celugoMDa dEhane celuveyara manadannane ||3||
taavareya naDuvesaLinaMdadi celuva kaNgaLa cennane
maMdarava hottavane OhO vaMdisuve gOviMdane ||4||
praLaya kaalada kappu kaDalali mIna rUpadi viharisi
vEdagaLa taMditta naathane ninage maNivanu naalmogaM ||5||
kUrma rUpava taLedu bennali maMdaraadriya dhariside
ella lOkagaLannu hottiya nInu surarigU Asare ||6||
taLedu sUkaradaMtha rUpava daanavana taridaatanE
bhUmiyanu hottavane nelesive yaj~jagaLu ninnaMgadi ||7||
O dEva narasiMha rUpane ripuva sILida vIrane
ella bhayavanu kaLeva nInala saggigara saMbaMdhika ||8||
celuva vaamana rUpa viprara vaTuvinaMtavatariside
daitya kula saMhaara nInala surara sauKyada kaaraNa ||9||
BRugukulOttama koDali raamane beLagutiha tEjasviyE
kShatriyara kula tarida vIrane ninna kiMkara SaMkara ||10||
raGukulOdbhava raamacaMdrane raakShasara saMhaarane
nInu hanumana svaami sIteya bageya kadda manOhara ||11||
dEvakiyoLavatarisiruva lOkaika suMdara mUruti
rukmiNiya kai hiDida nInala paaMDavara hita baaMdhava ||12||
daityarige mOhavanu barisida nitya sukhadaataarane
buddha rUpane dEva nInala tiLiva karuNisuvaatane ||13||
duShTa kulavanu taridu kolluta dharmavanu beLagisutali
kRutayugake bIjavanu bittuva kalki rUpane vaMdanaM ||14||
madhva muni baredaMtha dEvana guNava haaDuva gItavu
taapagaLa pariharisi maMgaLa nitya sukhavannIvudu ||15||
Ещё видео!