#carnaticmusic #dasarapadagalu #shiva #lordshiva #lordshivasongs #devaranama #jagannathadasaru
Song: Soma Shiva Sharva (ಸೋಮ ಶಿವ ಶರ್ವ)
Composer: Sri Jagannatha Dasaru (ಶ್ರೀ ಜಗನ್ನಾಥದಾಸರು)
Raga: Bilahari (ಬಿಲಹರಿ)
Tala: Adi (ಆದಿತಾಳ)
Music Composition and Sung By: Vidwan J S Shreekanta Bhat
ಸಾಹಿತ್ಯ:
ಸೋಮ ಶಿವ ಶರ್ವ ಭವ ಶ್ರೀಕಂಠ ನಿನ್ನ
ಪದ ತಾಮರಸ ಯುಗ್ಮಗಳಿಗೆ ನಮಿಸುವೆ ॥ ಪ ॥
ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೋ ।
ವಿತ್ತಪತಿ ಸಖ ವಿನಾಯಕನ ಜನಕ ॥
ಭೃತ್ಯವರ್ಗಕೆ ಬಾಹ ಅಪಮೃತ್ಯು ಪರಿಹರಿಸಿ ।
ಸಂಪತ್ತು ಪಾಲಿಪುದು ನಿವೃತ್ತಿ ಸಂಗಮಪ ॥ ೧ ॥
ಗೋಪತಿ ಧ್ವಜ ಘೋರ ಪಾಪ ಸಂಹರಣ ।
ಹರಿತೋಪಲೋಪಮ ಕಂಠ ಚಾಪಪಾಣಿ ॥
ಶ್ರೀಪತಿಯ ಶ್ರೀನಾಭಿಕೂಪ ಸಂಭವ ತನಯ ।
ನೀ ಪಾಲಿಸೆನ್ನನು ವಿರೂಪಾಕ್ಷ ॥ ೨ ॥
ಭಸಿತ ಭೂಷಿತ ಡಮರು ತ್ರಿಸುಳಗೈಯನೆ ।
ಶಂಭು ಕೀಸಲಯೋಪಮ ನವಿರ ಶಶಿಭೂಷಣ ॥
ಅಸುರ ರಿಪು ಸಿರಿ ಜಗನ್ನಾಥವಿಠಲನ ಪದ ।
ಬಿಸಜ ಧ್ಯಾನವನೀಯೋ ಹಸನಾಗಿ ಕಾಯೋ ॥ ೩ ॥
Lyrics:
sOma shiva sharva bhava shrIkanTha ninna
pada tAmarasa yugmagaLige namisuve || pa ||
mrutyuNjaya mrugANka kruttivAsa krupALo |
vittapati sakha vinAyakana janaka ||
bhrutyavargake bAha apamrutyu pariharisi |
sampattu pAlipudu nivrutti saNgamapa || 1 ||
gOpati dhvaja ghora pApa samharaNa |
haritOpalOpama kaNTha chApapANi ||
shrIpatiya shrInAbhikUpa sambhava tanaya |
nI pAlisennanu virUpAkSha || 2 ||
bhasita bhUShita Damaru tisuLagaiyane |
shambhu kIsalayOpama navira shashibhUShaNa ||
asura ripu siri jagannAtha viThalana pada |
bisaja dhyAnavanIyo hasanAgi kAyo || 3 ||
Ещё видео!