Namatraya mantra chanting 108 times.
Burns all the negativity in life (like health issues, mental issues, etc.) and paves way for the liberating saadhanaa, which yields peace in lives and infinite happiness in afterlife.
In words of Sri Vijaya dasaru:
ನಾಮತ್ರಯ ನೆನೆಯಿರೊ
ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು |ಪ|
ಅಚ್ಯುತಾ ಅಚ್ಯುತಾ ಎಂದು ಸ್ಮರಿಸಿದರೆ
ದುಶ್ಚರಿತವೆಂಬ ಮಹ ಕಾನನಕ್ಕೆ
ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ
ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು |1|
ಅನಂತ ಅನಂತ ಎಂದು ಮನದಲ್ಲಿ ನೆನೆಯೆ
ನಾನಾ ಭವಬಂಧ ದುಷ್ಕರ್ಮದಿ
ಹೀನಾಯವನು ಕಳೆದು ಹಿತದಿಂದಲಿ ವೊಲಿದು
ಆನಂದ ಆನಂದವಾದ ಫಲ ಕೊಡುವುದು. |2|
ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ
ನೋವಿಂದ ಕಡೆಹಾಕಿ ಸಾಕುವದು
ದೇವೇಶ ಶಿರಪತಿ ವಿಜಯವಿಠ್ಠಲೇಶನ
ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು |3|
Ещё видео!