ಈ ಸುಂದರ ಕಟ್ಟಡ ಸಿಟಿ ಬಸ್ ಮೂಲಕ ಪ್ರಯಾಣಿಸುವ ಪ್ರಯಾಣಿಕರ ಮನಸ್ಸಿಗೆ ಮೂದ ನೀಡುತ್ತಿದೆ ಈ ನೂತನ ಬಸ್ ನಿಲ್ದಾಣದ ಕಟ್ಟಡ.ಕಲಬುರಗಿ ನಗರದ ಸೂಪರ್ ಮಾರ್ಕೆಟ್ ನಲ್ಲಿ ಇರುವ 1.36 ಎಕರೆ ಪ್ರದೇಶದಲ್ಲಿ ನಗರ ಸಾರಿಗೆ ನಿಲ್ದಾಣವನ್ನು ಪ್ರಯಾಣಿಕರ ಸೌಲಭ್ಯ ಸಂಕಿರ್ಣದೊಂದಿಗೆ ನಿರ್ಮಾಣಗೊಂಡಿದೆ.
ಒಟ್ಟು 4455 ಚದುರ ಮೀಟರ್ ವಿಸ್ತರಣೆಯಲ್ಲಿ 2019 ಆ.1 ರಂದು ಕಟ್ಟಡದ ಕಾಮಗಾರಿ ಆರಂಭಿಸಲಾಗಿದೆ. ಒಟ್ಟು 2000 ಲಕ್ಷ ರೂ.( 20 ಕೋಟಿ ರೂ.)ವೆಚ್ಚದಲ್ಲಿ ಅತ್ಯಾಧುನಿಕವಾದ ಭವ್ಯ ಕಟ್ಟಡ ಇಲ್ಲಿ ತಲೆ ಎತ್ತಿದೆ.
18. 80 ಕೋಟಿ ರು ವೆಚ್ಚದ ಈ ಯೋಜನೆ ಇದೀಗ ಜನರಿಗೆ ಅಪ್ರಿತವಾಗುತ್ತಿರೋದು ಖುಷಿಯ ವಿಚಾರ. ಕೆಕೆಆರ್ಡಿಬಿ, ಬಂಡವಾಳ ವೆಚ್ಚ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯಜಡಿ ಹಣ ಹೊಂದಿಕೆಯಾಗಿದೆ. ಈ ನೂತನ ನಿಲ್ದಾಣದಲ್ಲಿ ಏಕ ಕಾಲಕ್ಕೆ 12 ಬಸ್ ಗಳ ನಿಲುಗಡೆಗೆ ಅವಕಾಶ( ನೆಲ ಅಂತಸ್ತು), ಪ್ರಯಾಣಿಕರ ಪ್ರಾಂಗಣ( ಆಸನಗಳ ವ್ಯವಸ್ಥೆ), ಸಂಚಾರ ನಿಯಂತ್ರಕರ ಕೊಠಡಿ, ಉಪಹಾರ ಗೃಹ, ಮುಂಗಡ ಟಿಕೆಟ್ ಕಾಯ್ದಿರಿಸುವ ಕೊಠಡಿ, ವಾಣಿಜ್ಯ ಮಳಿಗೆಗಳು, ಮಹಿಳಾ ನಿರೀಕ್ಷಣಾಲಯ, ಪಾಸುಗಳನ್ನು ವಿತರಿಸುವ ಕೊಠಡಿ, ಪ್ರಯಾಣಿಕರ ರಾಂಪ್, ಮಟ್ಟಿಲು( ಸ್ಟೇರ್ ಕೇಸ್), ಶುದ್ದಿಕರಣ ನೀರಿನ ಘಟಕ( ಆರ್ ಓ), ಪುರುಷರ ಮತ್ತು ಮಹಿಳೆಯರ ಶೌಚಾಲಯ( 3 ಸಂಖ್ಯೆ), ಬೆಳಕಿನ ವ್ಯವಸ್ಥೆ, ವಿಕಲಚೇತನರಿಗಾಗಿ ಸೌಲಭ್ಯಗಳು, ಉದ್ಯಾನವನ ಅಳವಡಿಸಲಾಗಿದೆ ಮತ್ತು ಬಸ್ ನಿಲುಗಡೆ ಆವರಣದಲ್ಲಿ ಸೌಂದರ್ಯಭಿವೃದ್ಧಿ ಕಲಾಕೃತಿಗಳು ಗಮನ ಸೆಳೆಯತ್ತಿವೆ. #travel #travelvlogs #bus
Ещё видео!