ಕುಂದಾಪುರ ತಾಲೂಕು, ಕೆದೂರು ಸಮೀಪ ಶಾನಾಡಿ ಎಂಬಲ್ಲಿ ಪ್ರಗತಿಪರ ಕೃಷಿಕರಾದ ಶಾನಾಡಿ ಉಮೇಶ ಶೆಟ್ಟಿ ಮತ್ತು ರಾಮಚಂದ್ರ ಭಟ್ ಇವರ ಸಾಹಸವೆಂಬಂತೆ ತಾವೇ ಸುಮಾರು 20 ಎಕ್ರೆ ಜಮೀನಿನಲ್ಲಿ ಕಬ್ಬು ಬೆಳೆದು, ಸರ್ಕಾರಕ್ಕೆ ಸಡ್ಡು ಹೊಡೆದು ತಮ್ಮ ಹೊಲದಲ್ಲೇ ಆಲೆಮನೆ ನಿರ್ಮಿಸಿ, ಕಬ್ಬು ಅರೆದು ಬೆಲ್ಲ ತಯಾರಿಸಿ ಅಲ್ಲಿಯೇ ಸಾವಯವ ಬೆಲ್ಲ ಮಾರಾಟ ಮಾಡುತ್ತಿದ್ದಾರೆ. ಬೆಳ್ಳಾಲ ಆನಂದ ಶೆಟ್ಟಿ ಬೆಲ್ಲ ತಯಾರಕರಾಗಿದ್ದು. ಪ್ರತಿದಿನ 8 ಜನ ಕೆಲಸಕ್ಕಿದ್ದಾರೆ.
ನೂರಾರು ಜನರು ದಿನಾ ಅಲ್ಲಿಗೆ ಬೇಟಿ ನೀಡುತಿದ್ದಾರೆ. ಹೆಚ್ಚಿನವರು ಬೆಲ್ಲವನ್ನು ಖರೀದಿಸುವುದರ ಮೂಲಕ ನಿಮ್ಮೊಂದಿಗೆ ನಾವುದ್ದೇವೆ ಎಂಬ ಧೈರ್ಯ ತುಂಬುತ್ತಿದ್ದಾರೆ. ಕಬ್ಬಿನ ಹಾಲು ಲೀಟರ್ ಗೆ ರೂ .25/- ಮತ್ತು ಬೆಲ್ಲ ಕಿಲೋಗೆ ರೂ.60/- ಮಾತ್ರ. 1.5 ಕಿಲೋ ದಿಂದ 25 ಕಿಲೋ ಡಬ್ಬ ಬೆಲ್ಲ ದೊರೆಯುತ್ತದೆ. ಜೊನಿ ಬೆಲ್ಲ ಕೂಡ ಲಭ್ಯವಿದೆ. ಪ್ಲಾಸ್ಟಿಕ್ ಪಾತ್ರೆ ಬಿಟ್ಟು ಇನ್ನಾವುದೇ ಲೋಹದ ಪಾತ್ರೆ ಕೊಂಡುಹೋದರೆ ಉತ್ತಮ. ರಸ್ತೆ ಸಂಪರ್ಕವಿದೆ. ಅಲ್ಲಲ್ಲಿ ಆಲೆಮನೆಗೆ ದಾರಿ ಎನ್ನುವ ಸೂಚನಾ ಪಾಲಕಗಳಿವೆ.
ರೈತದ್ವಯರಿಬ್ಬರ ಈ ಹೋರಾಟಕ್ಕೆ ನಮ್ಮೆಲ್ಲರ ಸಹಕಾರ ಅಗತ್ಯ.
🙏🙏🙏
Ещё видео!