TV9 News: Makara Sankranti at Sri Gavi Gangadhareshwara Temple*Bangalore
► Download TV9 Kannada Android App: [ Ссылка ]
► Subscribe to Tv9 Kannada: [ Ссылка ]
► Circle us on G+: [ Ссылка ]
► Like us on Facebook:[ Ссылка ]
► Follow us on Twitter: [ Ссылка ]
► Follow us on Pinterest: [ Ссылка ]
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಬೆಂಗ್ಳೂರಿನಲ್ಲಿರೋ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಭಕ್ತಿಯ ವೈಭವ ಕಳೆಗಟ್ಟಿದೆ. ಪ್ರತಿವರ್ಷವೂ ನಂದಿಯ ಕೊಂಬಿನ ಮೂಲಕ ಹಾದು ಹೋಗುವ ಸೂರ್ಯರಶ್ಮಿ ಶಿವಲಿಂಗಕ್ಕೆ ಮುತ್ತಿಕ್ಕುತ್ತೆ. ಈ ಕೌತುಕದ ಕ್ಷಣ ನೋಡಲು ಈ ವರ್ಷವೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಸಂಜೆ 5:20ರಿಂದ ಐದೂವರೆ ಗಂಟೆ ಸುಮಾರಿಗೆ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಲಿವೆ. ಈ ಕೌತುಕವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯ್ತಿದ್ದಾರೆ.. ಇನ್ನು, ಮಧ್ಯಾಹ್ನ ಉತ್ತರಾಯಣ ಪ್ರವೇಶವಾಗಲಿದ್ದು, ಮಧ್ಯಾಹ್ನದ ಬಳಿಕ ದೇವಸ್ಥಾನದಲ್ಲಿ ವಿಶೇಷಪೂಜಾ ಕೈಂಕರ್ಯ ನೆರವೇರಲಿದೆ. ಜೊತೆಗೆ ಬೆಳಗ್ಗೆ 8 ಗಂಟೆಯಿಂದ ಸಂಕ್ರಮಣ ಅಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹಾಲು, ಎಳೆನೀರು, ಜೇನುತುಪ್ಪ, ಮೊಸರು ಹಾಗೂ ಬೆಣ್ಣೆಯಿಂದಲೂ ಅಭಿಷೇಕ ಮಾಡಲಾಗುತ್ತೆ. ಇದಾದ ಬಳಿಕ ಮಧ್ಯಾಹ್ನದವರೆಗೂ ಶಿವನ ದರ್ಶನ ಪಡೆಯೋಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಬಳಿಕ ಭಕ್ತರಿಗೆ ಪ್ರವೇಶ ನಿರ್ಬಂಧಿಸಿ ಸೂರ್ಯರಶ್ಮಿಯ ಬಳಿಕ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಲಾಗುತ್ತೆ.
Ещё видео!